ತಳಿಯ ವೈಷಿಷ್ಟತೆಗಳು

ಆಲ್ಫೋನ್ಸೊ/ ಬಾದಾಮಿ/ ಆಪೂಸ್

 
 
 • ಮಾವಿನ ಹಣ್ಣುಗಳ ರಾಜ ಎಂದೇ ಖ್ಯಾತಿ
 • ನಾರುರಹಿತ ಬಹಳ ಸಿಹಿ ಮತ್ತು ರುಚಿಕರ ತಿರಳು.
 • ಹೇರಳವಾಗಿರುವ ವಿಟಮಿನ್ ‘ಎ’ ಹಾಗೂ ‘ಸಿ’ ಅಂಶ ಹೊಂದಿದೆ.
 • ಏಪ್ರಿಲ್‍ನಿಂದ ಜೂನ್ ತಿಂಗಳ ನಡುವೆ ಲಭ್ಯವಿರುವ ಮಧ್ಯ ಮಾಸಿಕ ತಳಿ
 • ಟಿಎಸ್‍ಎಸ್: 19.00 ಡಿಗ್ರಿ ಬ್ರಿಕ್ಸ್ ಹಾಗೂ 90%ನಷ್ಟು ತಿರುಳು ಹೊಂದಿದೆ.
 • ಈ ಹಣ್ಣುಗಳು ಮಧ್ಯಮ ಗಾತ್ರ ಹೊಂದಿದ್ದು, ಸುಮಾರು 250 ಗ್ರಾಂ ತೂಗುತ್ತವೆ ಮತ್ತು ಅಂಡಾಕಾರವಿದ್ದು, ಬಂಗಾರದ ಹಳದಿ ಬಣ್ಣ ಹೊಂದಿರುತ್ತವೆ.
 • ಟೇಬಲ್ ಹಾಗೂ ಕ್ಯಾನಿಂಗ್‍ಗೆ ಸೂಕ್ತವಾಗಿದೆ.
 • ಇದರಲ್ಲಿ ಸಕ್ಕರೆ:ಆಸಿಡ್ ಅಂಶಗಳ ಮಿಶ್ರಣ ಉತ್ತಮವಾಗಿರುತ್ತದೆ ಹಾಗೂ ಹೆಚ್ಚು ದಿನಗಳವರೆಗೆ ಉಳಿಯುತ್ತವೆ.
 • ರಫ್ತಿಗೆ ಸೂಕ್ತವಾದ ತಳಿಯಾಗಿದೆ.
 
 

ಬಂಗನಪಲ್ಲಿ

 
 
 • ಮೇ-ಜುಲೈ ತಿಂಗಳ ನಡುವೆ ದೊರೆಯುವ ಮಧ್ಯಂತರ ತಳಿಯಾಗಿದೆ.
 • ಟಿಎಸ್‍ಎಸ್: 18.50 ಡಿಗ್ರಿ ಬ್ರಿಕ್ಸ್ ಹಾಗೂ 61.70% ತಿರುಳು ಹೊಂದಿದೆ.
 • ಈ ಹಣ್ಣುಗಳು ಸಾಧಾರಣವಾಗಿ ದೊಡ್ಡ ಗಾತ್ರ ಹೊಂದಿದ್ದು, ಸರಾಸರಿ 350-400 ಗ್ರಾಂಗಳಷ್ಟು ತೂಗುತ್ತವೆ.
 • ಈ ಹಣ್ಣುಗಳು ಹೊರಗಿನಿಂದ ಬಂಗಾರದ ಹಳದಿ ಬಣ್ಣ ಹಾಗೂ ಒಳಗೆ ಹುಲ್ಲು ಹಳದಿಯಿಂದ ಬಂಗಾರದ ಹಳದಿ ಬಣ್ಣದಲ್ಲಿರುತ್ತವೆ.
 • ಇದರ ತಿರುಳು ನಾರುರಹಿತವಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ, ತಿನ್ನಲು ಬಹಳ ಸಿಹಿಯಾಗಿರುತ್ತವೆ.
 • ಈ ಹಣ್ಣುಗಳು ಹೆಚ್ಚು ದಿನದವರೆಗೆ ಕೆಡುವುದಿಲ್ಲ.
 • ರಫ್ತಿಗೆ ಸೂಕ್ತವಾದ ತಳಿಯಾಗಿದೆ.
 
 

ದಶೇಹರಿ

 
 
 • ಮಧ್ಯ ಮಾಸಿಕ ತಳಿಯಾಗಿದೆ.
 • ಟಿಎಸ್‍ಎಸ್: 23.13 ಡಿಗ್ರಿ ಬ್ರಿಕ್ಸ್ ಹಾಗೂ 59.92% ತಿರುಳು ಹೊಂದಿದೆ.
 • ಈ ಹಣ್ಣುಗಳು ಸಾಧಾರಣ ಗಾತ್ರ ಹೊಂದಿರುತ್ತದೆ, ಅಂಡಾಕಾರವಿದ್ದು, ಹಳದಿ ಬಣ್ಣ ಹೊಂದಿರುತ್ತವೆ
 • ಇದರ ವಾಟೆ ಸಣ್ಣಗಿದ್ದು, ಹೆಚ್ಚು ದಿನ ಕೆಡುವುದಿಲ
 
 

ಕೇಸರ್

 
 
 • ಲಭ್ಯವಾಗುವ ಆರಂಭದ ತಳಿಯಾಗಿದೆ.
 • ಸಾಧಾರಣ ಗಾತ್ರ, ಸಿಹಿಯಾದ ರುಚಿ ಹಾಗೂ ನಾರುರಹಿತ
 • ಹೆಚ್ಚು ಸಕ್ಕರೆ-ಆಸಿಡ್ ಮಿಶ್ರಣ
 • ಈ ಹಣ್ಣುಗಳು ಮಾಗಿದ ಮೇಲೆ ಆಕರ್ಷಕ ಏಪ್ರಿಕಾಟ್ ಹಳದಿ ಬಣ್ಣದಿಂದ ತಿಳಿ ಕೆಂಪು ಬಣ್ಣಕ್ಕೆ ತಿರುಗುತ್ತವೆ
 • ಟಿಎಸ್‍ಎಸ್: 17.8 ಡಿಗ್ರಿ ಬ್ರಿಕ್ಸ್ ಹಾಗೂ 67.70% ತಿರುಳು ಹೊಂದಿದೆ.
 • ರಫ್ತಿಗೆ ಸೂಕ್ತವಾದ ತಳಿ ಹಾಗೂ ಹೆಚ್ಚು ದಿನ ಕೆಡುವುದಿಲ್ಲ
 
 

ನೀಲಂ

 
 
 • ಇದು ಮಾಸದ ಕೊನೆಯಲ್ಲಿ ದೊರೆಯುವ ತಳಿಯಾಗಿದೆ.
 • ಮಧ್ಯಮ ಗಾತ್ರ, ಅಂಡಾಕಾರ ಹಾಗೂ ಕೇಸರಿ ಮಿಶ್ರಿತ ಹಳದಿ ಬಣ್ಣದಲ್ಲಿರುತ್ತವೆ
 • ಉತ್ತಮ, ನಾರುರಹಿತ ಹಣ್ಣು, ಹೆಚ್ಚು ದಿನ ಕೆಡುವುದಿಲ್ಲ
 • ಟಿಎಸ್‍ಎಸ್: 20.00 ಡಿಗ್ರಿ ಬ್ರಿಕ್ಸ್ ಹಾಗೂ 57% ತಿರುಳು ಹೊಂದಿದೆ.
 • ಪ್ರತಿ ಹಣ್ಣು ಸರಾಸರಿ 200-250 ಗ್ರಾಂ ತೂಗುತ್ತವೆ
 
 

ಮಲ್ಲಿಕಾ

 
 
 • ನೀಲಂ ಹಾಗೂ ದಶೇಹರಿಗಳಿಂದ ಪಡೆದಿರುವ ಹೈಬ್ರಿಡ್ ತಳಿಯಾಗಿದೆ.
 • ತಳಿ ಸಂವರ್ಧನೆಯ ಮೂಲಕ ಅಭಿವೃದ್ಧಿಪಡಿಸಿರುವ ಮೊದಲ ಮಾವಿನ ಹೈಬ್ರಿಡ್ ತಳಿ.
 • ಹೆಚ್ಚು ಇಳುವರಿ, ಕ್ರಮಬದ್ಧ ಹಣ್ಣುಗಳು ಹಾಗೂ ಮಾಸದ ಅಂತ್ಯದಲ್ಲಿ ಲಭ್ಯವಾಗುತ್ತವೆ ಹಾಗೂ ಸರಾಸರಿ 400-600 ಗ್ರಾಂಗಳು ತೂಗುತ್ತವೆ.
 • ಟಿಎಸ್‍ಎಸ್: 27.00 ಡಿಗ್ರಿ ಬ್ರಿಕ್ಸ್ ಹಾಗೂ 65.80% ತಿರುಳು ಹೊಂದಿದೆ.
 • ಹೆಚ್ಚು ದಿನ ಕೆಡುವುದಿಲ್ಲ
 • ಹಣ್ಣುಗಳು ದೊಡ್ಡ ಗಾತ್ರದಲ್ಲಿರುತ್ತವೆ, ಅಂಡಾಕಾರದಲ್ಲಿದ್ದು, ಕೇಸರಿ ಹಳದಿ ಬಣ್ಣ ಹೊಂದಿರುತ್ತವೆ
 • ರಫ್ತಿಗೆ ಸೂಕ್ತವಾದ ತಳಿ
 
 

ಮಲ್‍ಗೋವಾ

 
 
 • ಇದೊಂದು ಅಂತ್ಯ ಮಾಸಿಕ ತಳಿ
 • ಇದು ದಕ್ಷಿಣ ಭಾರತದ ವಾಣಿಜ್ಯ ತಳಿ
 • ದೊಡ್ಡ ಗಾತ್ರ, ಗುಂಡಾದ ಆಕಾರ ಹಾಗೂ ತಿಳಿ ಹಳದಿ ಬಣ್ಣ ಹೊಂದಿದ್ದು, ನಾರುರಹಿತ ಹಣ್ಣು
 • ಅತ್ಯುತ್ತಮ ಗುಣಮಟ್ಟದ ಹಣ್ಣು ಹಾಗೂ ಹೆಚ್ಚು ದಿನ ಕೆಡುವುದಿಲ್ಲ
 • ಟಿಎಸ್‍ಎಸ್: 20.80 ಡಿಗ್ರಿ ಬ್ರಿಕ್ಸ್ ಹಾಗೂ 64.40% ತಿರುಳು ಹೊಂದಿದೆ.
 
 

ಆಮ್ರಪಾಲಿ

 
 
 • ದಶೇಹರಿ ಹಾಗೂ ನೀಲಂನಿಂದ ಪಡೆದಿರುವ ಹೈಬ್ರಿಡ್ ತಳಿ.
 • ಕುಳ್ಳ, ಕ್ರಮಬದ್ಧವಾಗಿ ಹಣ್ಣು ಬಿಡುವ ಹಾಗೂ ಅಂತ್ಯ ಮಾಸಿಕ ತಳಿ.
 • ಅತಿ ಸಾಂದ್ರತೆ ನೆಡುವಿಕೆಗೆ ಸೂಕ್ತವಾದ ತಳಿ.
 • ಕ್ಲಸ್ಟರ್ ಬೇರಿಂಗ್ ಹಾಗೂ ಚಿಕ್ಕ ಗಾತ್ರದ ಹಣ್ಣುಗಳು.
 • ಟಿಎಸ್‍ಎಸ್: 23.20 ಡಿಗ್ರಿ ಬ್ರಿಕ್ಸ್ ಹಾಗೂ 72.10% ತಿರುಳು ಹೊಂದಿದೆ.
 
 

ರಸಪೂರಿ

 
 
 • ಮಾಸದ ಆರಂಭಿಕ ಹಣ್ಣು, ದಕ್ಷಿಣ ಭಾರತದಲ್ಲಿ ಬಹಳ ಹೆಸರುವಾಸಿ
 • ಪೈರಿ, ಕಲಮಿ ಎಂದೂ ಕರೆಯಲ್ಪಡುತ್ತದೆ.
 • ಹೆಚ್ಚು ತೂಕವಿದ್ದು, ಕ್ರಮಬದ್ಧವಾಗಿ ಹಣ್ಣು ಬಿಡುತ್ತವೆ.
 • ಹಣ್ಣುಗಳು ಸಾಧಾರಣ ಗಾತ್ರ ಹೊಂದಿದ್ದು, ಉತ್ತಮ ಗುಣಮಟ್ಟ ಹೊಂದಿರುತ್ತವೆ
 • ರುಚಿಕರ ಹಾಗೂ ಉತ್ತಮ ಸಕ್ಕರೆ-ಆಸಿಡ್ ಮಿಶ್ರಣ
 • ಇದರ ತಿರುಳು ಮೃದುವಾಗಿರುತ್ತದೆ, ಹಳದಿ ಬಣ್ಣ ಹೊಂದಿದ್ದು ನಾರುರಹಿತ ಹಣ್ಣುಗಳು
 • ಇದು ಹೆಚ್ಚು ದಿನ ಕೆಡುವುದಿಲ್ಲ
 • ಟಿಎಸ್‍ಎಸ್: 20.30 ಡಿಗ್ರಿ ಬ್ರಿಕ್ಸ್ ಹಾಗೂ 67.40% ತಿರುಳು ಹೊಂದಿದೆ.
 
 

ತೋತಾಪುರಿ

 
 
 • ಮಧ್ಯ ಮಾಸಿಕ ತಳಿ
 • ಇತರೆ ಹೆಸರುಗಳು – ಬೆಂಗಳೂರ, ಚಿತ್ತೂರ
 • ಕ್ರಮಬದ್ಧ ಹಾಗೂ ಹೆಚ್ಚು ಹಣ್ಣು ಬಿಡುವ ತಳಿ
 • ಹಣ್ಣುಗಳು ದೊಡ್ಡ ಗಾತ್ರ ಹೊಂದಿದ್ದು, ಸಾಧಾರಣ ಗುಣಮಟ್ಟದ ಹಣ್ಣುಗಳಾಗಿವೆ
 • ವಿಶಿಷ್ಟ ಪರಿಮಳ ಹಾಗೂ ರುಚಿ, ಬಂಗಾರದ ಹಳದಿ ಬಣ್ಣದ ಹಣ್ಣುಗಳು
 • ಸಂಸ್ಕರಣೆಗೆ ಹೆಚ್ಚು ಬಳಸಲಾಗುತ್ತದೆ
 • ಟಿಎಸ್‍ಎಸ್: 17.50 ಡಿಗ್ರಿ ಬ್ರಿಕ್ಸ್ ಹಾಗೂ 70.50% ತಿರುಳು ಹೊಂದಿದೆ.
 • ಒಣ ಪ್ರದೇಶಗಳಲ್ಲಿ ಬೆಳೆಯಲು ಹೆಚ್ಚು ಸೂಕ್ತ
 
 

ಸೆಂದೂರ

 
 
 • ಮಾಸದ ಆರಂಭಿಕ ತಳಿ, ಏಪ್ರಿಲ್‍ನಿಂದ ಮೇ ತಿಂಗಳವರೆಗೆ ಲಭ್ಯ, 
 • ಇದರ ಸವಿಯಾದ ರುಚಿ ಹಾಗೂ ಪರಿಮಳದಿಂದಾಗಿ “ಜೇನು ಮಾವು” ಎಂದೂ ಕರೆಯಲ್ಪಡುತ್ತದೆ
 
 

ಹಿಮಾಮ್ ಪಸಂದ್

 
 
 • ಮೇ ತಿಂಗಳಿಂದ ಜೂನ್ ತಿಂಗಳವರೆಗೆ ಲಭ್ಯ
 • ಸರಾಸರಿ ಹಣ್ಣಿನ ತೂಕ 400-600 ಗ್ರಾಂಗಳು
 • ಟಿಎಸ್‍ಎಸ್: 20.10 ಡಿಗ್ರಿ ಬ್ರಿಕ್ಸ್ ಹಾಗೂ 61.50% ತಿರುಳು ಹೊಂದಿದೆ.

Last Updated : 30-06-2020 01:49 PM
Modified By : Admin


ಹಕ್ಕುತ್ಯಾಗ :

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

 • ನಮ್ಮ ಬಗ್ಗೆ
 • ಜಾಲನಕ್ಷೆ
 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು
 • ಗೌಪ್ಯತಾ ನೀತಿ
 • ಸಹಾಯ
 • ಪರದೆ ವಾಚಕ
 • ಮಾರ್ಗಸೂಚಿಗಳು
 • ಆವೃತ್ತಿ : CeG/KRN 2.0
 • ಸಂದರ್ಶಕರು : 550
 • ಇತ್ತೀಚಿನ ನವೀಕರಣ : 27-01-2021 05:15 PM
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ - ವೆಬ್ ಪೋರ್ಟಲ್, ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ